Speaker 2026

ವಿಕ್ರಮ ಹತ್ವಾ ರ್

Bio

ವಿಕ್ರಮ ಹತ್ವಾ ರ್ ಹುಟ್ಟಿದ್ದು 1982ರಲ್ಲಿ ಕುಂದಾಪುರ ತಾಲೋ ಕಿನ ಬೀ ಜಾಡಿ ಎಂಬ ಪುಟ್ಟ ಗ್ರಾಮದಲ್ಲಿ. ಶಿವಾಜಿನಗರದ ಗಲ್ಲಿಗಳಲ್ಲಿ, ಕರಾವಳಿಯ ಯಕ್ಷಗಾನದ ಚಂಡೆಗಳ ಬಡಿತದಲ್ಲಿ, ತೀ ರ್ಥ ಹಳ್ಳಿಯ ತುಂಗೆಯ ಮಡಿಲಿನಲ್ಲಿ ಅರಳಿದ ಬದುಕು ಬೆಂಗಳೂರು, ಕುಶಾಲನಗರ, ತಿರುವನಂತಪುರ, ಮುಂಬೈ , ನ್ಯೂ ಯಾರ್ಕ್ , ಲಂಡನ್ ನಗರಗಳಲ್ಲಿ ಸಂಚರಿಸಿದೆ. ವೃತ್ತಿಯಿಂದ ಸಾಫ್ಟ್ವೇ ರ್ ಇಂಜಿನಿಯರ್. 

ಕವನ ಸಂಕಲನ:  ಇದೇ ಇರಬೇ ಕು ಕವಿತೆ  ಅಕ್ಷೀ ಎಂದಿತು ವೃಕ್ಷ!  ಮೆಟ್ರೊ ಝೆನ್  ನಿಶ್ಚಲವ ಕಲಕಿದ ಹಕ್ಕಿ ಕತಾ ಸಂಕಲನ:  ಝೀ ರೋ ಮತ್ತು ಒಂದು  ಹಮಾರಾ ಬಜಾಜ್’  ಕಾಗೆ ಮೇ ಷ್ಟ್ರು  ಪ್ರಬಂಧ ಸಂಕಲನ:  ನೀ ಮಾಯೆಯೊಳಗೋ ..  ಓದಿದ್ದು ನೋ ಡಿದ್ದು  ಸಂಸೃತಿ ಚಿಂತನೆ, ವಿಮರ್ಶೆ , ತತ್ವಜ್ಞಾ ನ, ಸಂಗೀ ತ, ಸಿನಿಮಾಗಳಲ್ಲಿ ಆಸಕ್ತಿ. ಹಲವು ಗೋ ಷ್ಠಿಗಳಲ್ಲಿ ಉಪನ್ಯಾ ಸ ನೀ ಡಿದ್ದಾರೆ. ಕನ್ನಡ ಚಲನಚಿತ್ರಗಳಿಗೆ ಕತೆ ಚಿತ್ರಕತೆ ಸಂಭಾಷಣೆ ಬರೆದಿದ್ದಾರೆ. ‘ಪ್ರಕೃತಿ’ ಪ್ರಕಾಶನದ ಮೂಲಕ ಪುಸ್ತಕ ಪ್ರಕಟನೆಯಲ್ಲಿ ತೊ ಡಗಿದ್ದಾರೆ. 

‘ಝೀ ರೋ ಮತ್ತು ಒಂದು’ ಕಥಾ ಸಂಕಲನಕ್ಕೆ ಕೇ ಂದ್ರ ಸಾಹಿತ್ಯ ಅಕಾಡೆಮಿಯಿಂದ ಯುವ ಪುರಸ್ಕಾ ರ ದೊ ರೆತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಅರಳು ಸಾಹಿತ್ಯ’ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಇವರ ಕತೆ-ಕವನಗಳು ಹಲವು ಪತ್ರಿಕೆಗಳ ಸ್ಪರ್ಧೆ ಗಳಲ್ಲಿ ಬಹುಮಾನ ಪಡೆದಿವೆ. 

ಹೊ ಸ ಭಾಷೆ, ವಿಶಿಷ್ಟ ವಸ್ತು-ನಿರ್ವ ಹಣೆ, ಮಾಹಿತಿ ತಂತ್ರಜ್ಞಾ ನ ಯುಗದ ಪಲ್ಲಟಗಳು, ಜಾಗತೀ ಕರಣ ಸಂದರ್ಭ ದಲ್ಲಿನ ಮನುಷ್ಯ ಸಂಬಂಧಗಳು ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟಗಳ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾ ರರ ಕತೆಗಳಲ್ಲಿ ವಿಮರ್ಶ ಕರು ಗುರುತಿಸಿರುವ ಕೆಲವು ವಿಶೇ ಷತೆಗಳು. ಜನಪ್ರಿಯತೆ ಹಾಗು ಸರಳೀ ಕೃತ ತೀ ರ್ಮಾ ನಗಳ ಮೋ ಹಕ್ಕೆ ಒಳಹಾಗದೆ, ಪ್ರಾ ಮಾಣಿಕವಾಗಿ ತಮ್ಮ ಅನುಭವವನ್ನು ಶೋ ಧಿಸುತ್ತ, ಅಂತಹ ಶೋ ಧನೆಗೆ ಶಬ್ದರೂಪ ಕೊ ಡವ ವಿಶಿಷ್ಟ ಕವಿ. ಇವರ ಕವಿತೆಗಳಲ್ಲಿ ಜೀ ವಂತ ವಿವರಗಳನ್ನು ತುಸು ಅಲುಗಿಸಿ, ಅದರ ವಿನ್ಯಾ ಸವನ್ನು ಅನುಭವಿಸುವ ಕ್ರಮ – ಒಂದು ಬೇ ಷರತ್ ಚಡಪಡಿಕೆ ಮತ್ತು ಮಾರ್ದ ವವು ಆವರಿಸುವಂತೆ ಮಾಡುತ್ತದೆ ಎನ್ನುವುದು ಕನ್ನಡದ ಪ್ರಮುಖ ವಿಮರ್ಶ ಕರ ಹಾಗು ಕವಿಗಳ ಅಭಿಪ್ರಾಯ.