Speaker 2026
ತೇಜಶ್ರೀ
Bio
ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಭಾಷಾಂತರ ಡಿಪ್ಲೊಮಾ ಪದವೀ ಧರೆಯಾದ ಜ.ನಾ. ತೇ ಜಶ್ರ ೀ ಅವರು ಉಪನ್ಯಾ ಸಕಿಯಾಗಿ ಹಾಗೂ ಸಂಶೋ ಧನಾ ಸಹಾಯಕಿಯಾಗಿ ಸೇ ವೆ ಸಲ್ಲಿಸಿದ್ದಾರೆ. ಭಾರತ ಸರ್ಕಾ ರದ ಜೂನಿಯರ್ ಫೆಲೋ ಶಿಪ್ ಹಾಗೂ ‘ಜಿ.ಎಸ್.ಎಸ್.ಟ್ರಸ್ಟ್’ ಫೆಲೋ ಶಿಪ್ ಗೌರವಗಳಿಗೆ ಪಾತ್ರರಾಗಿರುವ ಇವರು, ‘ಲಯ’, ‘ತಿಳಿಗೊ ಳ’ ಸೇ ರಿದಂತೆ ಹಲವು ಕವನಸಂಕಲನಗಳನ್ನು, ‘ಬೆತ್ತಲೆ ಫಕೀ ರ’, ‘ಅನ್ನಾ ಕರೆನಿನಾ’ ಮುಂತಾದ ಪ್ರಸಿದ್ಧಅನುವಾದ ಕೃತಿಗಳನ್ನು ಹಾಗೂ ‘ಜೀ ವರತಿ’ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಯು.ಆರ್.ಅನಂತಮೂರ್ತಿ ಯವರ ಆತ್ಮಕತೆ ‘ಸುರಗಿ’ಯ ನಿರೂಪಣೆ ಮತ್ತು ಸಂಯೋ ಜನೆ ಮಾಡಿರುವ ಇವರಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಬಹುಮಾನಗಳು, ಶ್ರ ೀವಿಜಯ ಸಾಹಿತ್ಯ ಪ್ರಶಸ್ತಿ, ಪು.ತಿ.ನ. ಕಾವ್ಯ ನಾಟಕ ಪುರಸ್ಕಾ ರ ಮತ್ತು ‘ಮಹಿಳಾ ಸಾಧಕಿ’ ಪುರಸ್ಕಾ ರ ಸೇ ರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.