Speaker 2026

ಎನ್ ಸಂಧ್ಯಾರಾಣಿ

Bio

ಎನ್ ಸಂಧ್ಯಾರಾಣಿ

360/10/1, ಮೊದಲ ಮಹಡಿ, 37ನೆಯ ಅಡ್ಡರಸ್ತೆ

9ನೆಯ ಮುಖ್ಯರಸ್ತೆ, 5 ಬ್ಲಾಕ್, ಜಯನಗರ, ಬೆಂಗಳೂರು 560041

ಫೋನ್ : 9845811558, ಈಮೇಲ್ : nagaraj.sandhya@yahoo.com

ಬರಹಗಾರ್ತಿ, ಅನುವಾದಕಿ, ಕವಯತ್ರಿ, ನಾಟಕಕಾರ್ತಿ, ಚಲನಚಿತ್ರಕ್ಕಾಗಿ ಕಥೆ, ಕಥಾ ವಿಸ್ತರಣೆ, ಸಂಭಾಷಣೆ. ನಾಟಕ ಮತ್ತು ಚಲನಚಿತ್ರ ವಿಮರ್ಶೆ. ಮುದ್ರಣ, ದೃಶ್ಯ ಮತ್ತು ಅಂತರ್ಜಾಲ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ. 

ಓದು, ಪದವಿ : ಕೋಲಾರ ಜಿಲ್ಲೆ, ಬಂಗಾರಪೇಟೆ. ಇತಿಹಾಸ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರಗಳಲ್ಲಿ ಪದವಿ, ಮೈಸೂರು ವಿಶ್ವ ವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ. 

ವೃತ್ತಿ ಅನುಭವ :

avadhimag.com  ಕನ್ನಡದ ಪ್ರಮುಖ ಇ-ಮ್ಯಾಗಜೀನ್ ನಲ್ಲಿ 7 ವರ್ಷಗಳ ಕಾಲ ಉಪಸಂಪಾದಕಿಯಾಗಿ ಕರ್ತವ್ಯ ನಿರ್ವಹಣೆ

ETV Kannada News (TV 18 Group) ಗಾಗಿ ಸೈಡ್ ವಿಂಗ್ ಎನ್ನುವ ಕಾರ್ಯಕ್ರಮದ ಪರಿಕಲ್ಪನೆ ಮತ್ತು ನಿರ್ಮಾಣ. ಕರ್ನಾಟಕದ ಸಾಂಸ್ಕೃತಿಕ ಅಂಶಗಳಾದ ಸಾಹಿತ್ಯ, ಕಲೆ, ಬರಹಗಾರರು ಮತ್ತು ಇತರ ಸಾಂಸ್ಕೃತಿಕ ಆಯಾಮಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾದ ಕಾರ್ಯಕ್ರಮ

ಪುನೀತ್ ರಾಜಕುಮಾರ್ ಮತ್ತು ರಮೇಶ್ ನಿರ್ವಹಿಸಿದ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕಿ ಮತ್ತು ಭಾಷಾಂತರಕಾರ್ತಿಯಾಗಿ ಕಾರ್ಯನಿರ್ವಹಣೆ (2018 – 2019)

ಪುನೀತ್ ಫ್ಯಾನ್‌ಡಮ್ ಆಪ್ : ಕ್ಯುಬೇರ ಮತ್ತು ಪಿಆರ್‌ಕೆ ಪ್ರೊಡಕ್ಷನ್ ಸಹಭಾಗಿತ್ವದ ಪುನೀತ್ ರಾಜಕುಮಾರ್ ಅವರ ಬಗೆಗಿನ ಆಪ್ ನಲ್ಲಿ ಕ್ವಿಜ್ ಸಂಶೋದಕಿ ಮತ್ತು ಕಂಟೆಂಟ್ ಕ್ರಿಯೇಟರ್.

ಫ್ರೀಲ್ಯಾನ್ಸರ್, ಬರಹಗಾರ್ತಿ, ಅನುವಾದಕಿ. 

ಕಲೆ, ಮಹಿಳಾಕೇಂದ್ರಿತ, ಪ್ರಸ್ತುತ ವಿಷಯಗಳಿಗೆ ಸ್ಪಂದನೆ, ನಾಟಕ ವಿಮರ್ಶೆ, ಚಲನಚಿತ್ರ ವಿಮರ್ಶೆ ಇತ್ಯಾದಿಗಳನ್ನು ಕುರಿತಂತೆ ಹಲವಾರು ಪತ್ರಿಕೆ ಮತ್ತು ಮ್ಯಾಗಜೀನ್ ಗಳಲ್ಲಿ ಬರಹಗಳು ಪ್ರಕಟಗೊಂಡಿವೆ.

ಅಂಕಣ ಬರಹಗಳು ಮಹಿಳಾ ಕೇಂದ್ರಿತ, ಪ್ರಸ್ತುತ ವಿಷಯಗಳು, ರಂಗಭೂಮಿ ಮತ್ತು ಚಲನಚಿತ್ರಗಳನ್ನು ಕುರಿತ ವಿಶ್ಲೇಷಣಾತ್ಮಕ ಬರಹಗಳು

ಕೃತಿಗಳು :

ಪುಸ್ತಕಗಳು ‘ಹೇಳತೇವ ಕೇಳ’‘ಅವಧಿ’ ಹೊರತಂದ ನಿಜಜೀವನದಲ್ಲಿ, ಮನೆಯ ಒಳಗೆ ಮತ್ತು ಹೊರಗೆ ಮಹಿಳೆಯ ಮೇಲೆ ನಡೆದ ದೌರ್ಜನ್ಯಗಳ ಸಂಕಥನದ ಸಂಗ್ರಹ ಮತ್ತು ಸಂಯೋಜನೆ

  • ‘ಜೋಗಿ ರೀಡರ್’ಬರಹಗಾರರಾದ ಜೋಗಿ ಅವರ ಕೃತಿಗಳ ಸಂಪಾದನೆ
  • ‘ಯಾಕೆ ಕಾಡುತಿದೆ ಸುಮ್ಮನೆ’ಅಂಕಣ ಬರಹಗಳ ಸಂಗ್ರಹ
  • ‘ತುಂಬೆ ಹೂ’ಕನ್ನಡದ ಮೊಟ್ಟಮೊದಲ ನ್ಯೂರೋಸರ್ಜನ್ ಡಾ ನಾರಾಯಣ ರೆಡ್ದಿಯವರ ಜೀವನಚರಿತ್ರೆ
  • ‘ಪಾಂಡಿ ಎನ್ನುವ ರಂಗೋಲಿ’ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುದಾನದಡಿಯಲ್ಲಿ ಪಾಂಡಿಚೆರಿ ಪ್ರವಾಸ ಕಥನ
  • ‘ಆನು ನಿನ್ನನು ಹಾಡೆದಲ್ಲದೆ ಸೈರಿಸಲಾರೆನಯ್ಯ’ಬಿವಿ ಭಾರತಿಯವರೊಡನೆ ಹೊರತಂದ ಕವಿತೆಗಳ ಜುಗಲ್ ಬಂದಿ
  • ‘ಸಿನಿಮಾಯಾಲೋಕ’ಭಾರತೀಯ ಮತ್ತು ವಿಶ್ವ ಸಿನಿಮಾಗಳನ್ನು ಕುರಿತ ವಿಶ್ಲೇಷಣಾತ್ಮಕ ಬರಹಗಳು
    1. ‘ಇವ ಲೆಬನಾನಿನವ’ಬಾರ್ಬರಾ ಯಂಗ್ ಅವರು ಗಿಬ್ರಾನ್ ಕುರಿತು ಬರೆದ ‘This Man from Lebanon’ ಪುಸ್ತಕದ ಕನ್ನಡ ಅನುವಾದ
    2. ‘ಇಷ್ಟುಕಾಲ ಒಟ್ಟಿಗಿದ್ದು…’ಕಾದಂಬರಿ
    3. ‘ಕಲ್ಯಾಣ ಕೆಡುವ ಹಾದಿ’ನಿವೃತ್ತ ಐಎಎಸ್ ಅಧಿಕಾರಿ ವಿ ಬಾಲಸುಬ್ರಹ್ಮಣ್ಯಂ ಅವರ ಆತ್ಮಚರಿತ್ರೆ `Fall from Grace’ ಕನ್ನಡ ಅನುವಾದ
    4. ‘ಲವ್ ಟುಡೆ’ಪ್ರೇಮ ಕಥೆಗಳ ಸಂಕಲನಕ್ಕೆ ಸಹಯೋಗ ಕಥೆಗಾರ್ತಿ
  • ‘ನಾತಿಚರಾಮಿ’ಕಾದಂಬರಿ
  1. ‘ಮಲ್ಲಿಕಾರ್ಜುನ ಖರ್ಗೆ’ ಸುಖದೇವ್ ಥೋರಟ್ ಮತ್ತು ಚೇತನ್ ಶಿಂಧೆ ಅವರ ಸಂಪಾದನೆಯ ಪುಸ್ತಕದ ಕನ್ನಡ ಅನುವಾದ
  2. ‘ಅಂಟಿದ ನಂಟಿನ ಕೊನೆ ಬಲ್ಲವರಾರು…’ – ಕಥಾಸಂಕಲನ
  3. `ಅನ್ನಪೂರ್ಣಾದೇವಿಅಪೂರ್ವ ಕಲಾವಿದೆಯ ಅಶ್ರುತ ಗಾನ’ಅತುಲ್ ಮರ್ಚಂಟ್ ಜಟಾಯು ಅವರು ಬರೆದ, ‘Annapurnadevi – The Untold Story of a Reclusive Genius’ ಪುಸ್ತಕದ ಅನುವಾದ
  4. ‘ಅದುವೆ ರಂಗಸಾಲೆ’ ನಾಟಕಗಳನ್ನು ಕುರಿತ ವಿಶ್ಲೇಷಣಾತ್ಮಕ ಬರಹಗಳು (ಮುದ್ರಣದಲ್ಲಿ)

ರಂಗಭೂಮಿ : ‘ಪೂರ್ವಿ ಕಲ್ಯಾಣಿ’ – ಒಬ್ಬ ಗೃಹಿಣಿ ಮತ್ತು ಒಬ್ಬ ಸ್ವತಂತ್ರ ಮನೋಭಾವದ ತರುಣಿ – ಇಬ್ಬರ ಹೋರಾಟಗಳು, ಜೀವನಪ್ರೀತಿ, ಸಂಗೋಪನಾ ಗುಣಗಳನ್ನು ಕುರಿತ ನಾಟಕ

‘ನನ್ನೊಳಗಿನ ಹಾಡು ಕ್ಯೂಬಾ’ – ಕ್ಯೂಬಾ, ಚೆಗುವಾರ ಮತ್ತು ಫಿಡೆಲ್ ಕ್ಯಾಸ್ಟ್ರೋ ಮೂಲಕ ಲ್ಯಾಟಿನ್ ಅಮೇರಿಕಾ ದೇಶಗಳ ಸಂಘರ್ಷವನ್ನು ಕಟ್ತುವ ನಾಟಕ

ಕಲ್ಲರಳಿ ಹೆಣ್ಣಾಗಿ’ – ಕರ್ನಾಟಕ ಲೇಖಕಿಯರ ಸಂಘದ 8 ನೆಯ ಅಖಿಲ ಕರ್ನಾಟಕ ಸಮ್ಮೇಳನಕ್ಕಾಗಿ, ಕವಯತ್ರಿಯರ ಕವನಗಳನ್ನು ಇಟ್ಟುಕೊಂಡು ಹೆಣೆದ ರೂಪಕಾತ್ಮಕ ನಾಟಕ

ರಂಗಭೂಮಿ, ನಾಟಕಗಳನ್ನು ಕುರಿತ ಸರಣಿ ಬರಹಗಳು. 

Making Theatre : Rangashankara. ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಸ್ಥಳೀಯ ನಿರ್ದೇಶಕರು ನಿರ್ದೇಶಿಸಿದ ನಾಟಕಗಳನ್ನು ನೋಡಿ, ಅವುಗಳಲ್ಲಿ ಅತ್ಯುತ್ತಮ ನಾಟಕಗಳನ್ನು ಆರಿಸಿ, ಅವುಗಳ ನಿರ್ದೇಶಕರಿಗೆ ತರಬೇತಿ ನೀಡಿ, ಅವರ ನಾಟಕಗಳನ್ನು ರಂಗಶಂಕರದ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಕಾರ್ಯಕ್ರಮ. ಒಂದು ವರ್ಷ ಇದರ ಭಾಗವಾಗಿ, ಹಿರಿಯ ನಿರ್ದೇಶಕರಾದ ಶಶಿಧರ ಭಾರಿಗಾಟ್, ಕೆಜಿ ಕೃಷ್ಣಮೂರ್ತಿ, ನಟರಾಜ ಹೊನ್ನವಳ್ಳಿ ಅವರೊಂದಿಗೆ ಕೆಲಸ ಮಾಡಿದ ಅನುಭವ.

ನಾಟಕ ಬೆಂಗಳೂರು ನಾಟಕಸ್ಪರ್ಧೆ : ಈ ಸ್ಪರ್ಧೆಯ ಜ್ಯೂರಿಗಳಲ್ಲಿ ಒಬ್ಬರಾಗಿ ಕಾರ್ಯ ನಿರ್ವಹಣೆ.

ಚಲನಚಿತ್ರ ರಂಗ ‘ನಾತಿಚರಾಮಿ’ – ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದ ಕಥೆ, ಸಂಭಾಷಣೆ

‘ತತ್ಸಮ-ತದ್ಭವ’ ಸಂಭಾಷಣೆ

‘ಹೆಲಿಕಾಪ್ಟರ್ ಚಿಟ್ಟೆ’ ಚಿತ್ರದ ಕಥೆ-ಸಂಭಾಷಣೆ

ಹಲವು ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಸ್ಕ್ರಿಪ್ಟ್, ಕಥಾವಿಸ್ತರಣೆ

  ಪ್ರಜಾವಾಣಿ ಸಿನಿಸಮ್ಮಾನ – ಕನ್ನಡ ಚಲನಚಿತ್ರಗಳ ಪ್ರಶಸ್ತಿಯಲ್ಲಿ ನಾಲ್ಕು ವರ್ಷಗಳು ಸತತವಾಗಿ ಜ್ಯೂರಿತಂಡದಲ್ಲಿ ಭಾಗಿ

ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜ್ಯೂರಿ ಪ್ಯಾನೆಲ್ ನಲ್ಲಿ ಭಾಗಿ.

ಅನುವಾದಗಳು ಚಲನಚಿತ್ರಗಳು, ಸೀರಿಯಲ್‌ಗಳು ಮತ್ತು ಜಾಹಿರಾತು ಕ್ಷೇತ್ರದ 

ಅನುವಾದಗಳ ಜೊತೆಜೊತೆಯಲ್ಲಿ ಹಲವಾರು ಪುಸ್ತಕಗಳ ಮತ್ತು ಬರಹಗಳ ಅನುವಾದ.

ಅನಂತ ಕೌಶಲ’ – ಕಾಫಿಟೇಬಲ್ ಪುಸ್ತಕದ ಪರಿಕಲ್ಪನೆ ಮತ್ತು ಉಪಸಂಪಾದಕಿ.

ಅನೇಕ ಬರಹಗಳು ಪಿಯುಸಿ ಮತ್ತು ಡಿಗ್ರಿ ತರಗತಿಗಳ ಪಠಪುಸ್ತಕಗಳಲ್ಲಿವೆ