ಬಿ.ಎಂ.ಶ್ರೀ ಅವರ ಮೊಮ್ಮಗಳಾದ ಇವರ ಜನಿಸಿದ್ದು, 1934 ಡಿಸೆಂಬರ್ 18ರಂದು,ಬೆಂಗಳೂರಿನಲ್ಲಿ. ತಂದೆ ಎನ್.ಡಿ.ಎನ್.ರಾವ್, ತಾಯಿ ತಂಗಮ್ಮ. ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರೆ. ನವ್ಯ ಕತೆಗಳನ್ನು ಬರೆದ ಮಹಿಳೆಯರಲ್ಲಿ ಇವರು ಪ್ರಥಮರು. ವಯಸ್ಸಿನಲ್ಲೇ ಸನ್ಯಾಸದೀಕ್ಷೆ ಪಡೆದರು. ಸಂಗಮ (ಕಥಾ ಸಂಕಲನ) ಕರ್ನಾಟಕ ಸರಕಾರದಿಂದ 1985ರಲ್ಲಿ ಮರುಪ್ರಕಾಶನಗೊಂಡಿತು. ಸೇಬಿನ ಗಿಡ (ಅನುವಾದ) ಅವರ ಮುಖ್ಯ ಕೃತಿಗಳು