Lokesh Mosale

Lokesh Mosale

Bio

ಶ್ರೀಯುತ ಲೋಕೆಶ್‌ ಮೊಸಳೆ ಅವರು ೧೯೮೭ರಲ್ಲಿ ಹವ್ಯಾಸಿ ಪತ್ರಕರ್ತರಾಗಿ ಪತ್ರಿಕಾ ಕ್ಷೇತ್ರಕ್ಕೆ ಕಾಲಿರಿಸಿದ ಲೋಕೇಶ್‌ ಅವರು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಪರಿಣತರು. ವನ್ಯಜೀವಿ ಛಾಯಾಗ್ರಹಣವನ್ನು ಗಂಭೀರವಾಗಿ ರೂಢಿಸಿಕೊಂಡ ಲೋಕೇಶ್‌ ಅವರ ಸಾಧನೆ ಅತ್ಯಂತ ಗಮನಾರ್ಹ. ಕರ್ನಾಟಕ ಸರ್ಕಾರಕ್ಕಾಗಿ ಹಲವು ಸಾಕ್ಷ್ಯಾಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರು ನಿರ್ಮಿಸಿರುವ ಸಾಕ್ಷ್ಯ ಚಿತ್ರಗಳು ಮತ್ತು ಸೆರೆ ಹಿಡಿದಿರುವ ಸ್ಥಿರ ಚಿತ್ರಗಳು ಕರ್ನಾಟಕದ ವನ್ಯಜೀವವೈವಿಧ್ಯವನ್ನು ದಾಖಲಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. Jewels Of Rangnathittu DVD Birds of Ranganathittu ಪ್ರವಾಸಿ ಕಾರ್ಡ್‌ ಗಳು, ೧೦೦ಕ್ಕೂ ಹೆಚ್ಚು ಟೇಬಲ್ ಮತ್ತು ಗೋಡೆ‌ ಕ್ಯಾಲೆಂಡರ್‌ ಗಳು ಇದಕ್ಕೆ ಉದಾಹರಣೆ. ಇವರ ವನ್ಯಜೀವಿ ಛಾಯಾಚಿತ್ರಗಳು ಕರ್ನಾಟಕದೆಲ್ಲೆಡೆ ಮಾತ್ರವಲ್ಲ ನವದೆಹಲಿಯ ಇಂಡಿಯನ್‌ ಹ್ಯಾಬಿಟಾಟ್‌ ಸೆಂಟರ್‌ ನಲ್ಲಿಯೂ ಪ್ರದರ್ಶನಗೊಂಡಿವೆ. ಇನ್ನು ವ್ನನ್ಯಜೀವಿ ಸಿನಿಮಾಗಳು ಬೆಂಗಳೂರು, ಮೈಸೂರು, ಕೇರಳ, ಹರಿಯಾಣ, ಕೌಲಾಲಂಪುರ, ಚೀನಾ, ಫ್ರಾನ್ಸ್‌ ಮತ್ತು ನ್ಯೂಯಾರ್ಕ್‌ ಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಮಾತ್ರವಲ್ಲ ಪ್ರಶಸ್ತಿಗಳನ್ನೂ ಗಳಿಸಿವೆ. ಪರಿಸರದ ಬಗ್ಗೆ ನೈಜ ಕಾಳಜಿ ಹೊಂದಿರುವ ಲೋಕೆಶ್‌ ಅವರು ಸದಾ ಒಂದಿಲ್ಲೊಂದು ಪರಿಸರಪರ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ೨೦೧೮ರಲ್ಲಿ ಮೈಸೂರು ಚಾಮರಾಜನಗರ ಜಿಲ್ಲಾ ʻಗೌರವ ವೈಲ್ಡ್‌ ಲೈಫ್‌ ವಾರ್ಡನ್‌ʼ, ಮೇಳಾಪುರದ ಬೀ ಇಟರ್‌ ರಕ್ಷಿತ ಪ್ರದೇಶ ಸಲಹಾ ಸಮಿತಿಯ ಸದಸ್ಯತ್ವ,ದ ಗೌರವಗಳು ಇವರಿಗೆ ಸಂದಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸಲು ಸದಾ ಒಂದಿಲ್ಲೊಂದು ಚಿತ್ರ ಪ್ರದರ್ಶನ, ಸಂವಾದಗಳು ಮತ್ತು ಚಲನಚಿತ್ರ ಕಾರ್ಯಾಗಾರಗಳನ್ನು ನಡೆಸುತ್ತಲೇ ಇರುತ್ತಾರೆ