Akshatha Raj Perla

Akshatha Raj Perla

Bio

An eminent Tulu writer, is a casual compere at Akashvani Mangaluru. Her literary works span novels, plays, essays, poetry and stories. Some of notable Tulu publications include Bolli (novel), Beli – sapoda kann, Giddi, Mandara Malaka (plays). Some of notable kannada publications Sanchiyolagina sanjegalu (poetry), Kandeelu (story collection), Avalakki Pavalakki (essays), Nela Urulu and Paridhiyache (plays).
She has been honoured by the Karnataka Tulu Sahitya Academi, the Lions club of Mangalore as “Manvantara Young Writer” and has received S.U.Paniyadi Tulu Novel Award, Dharmasthala Ratnavarma Heggade Tulu Drama award (thrice), Kodagina Gauramma Datthinidhi for Havyaka stories among others.

ಅಕ್ಷತಾ ರಾಜ್ ಪೆರ್ಲ

ಕನ್ನಡ, ತುಳು, ಹವ್ಯಕ ಭಾಷೆಯ ಲೇಖಕರಾಗಿದ್ದು ತುಳು ಮಂಗಳೂರು ಆಕಾಶವಾಣಿಯಲ್ಲಿ ಹಂಗಾಮಿ ನಿರೂಪಕರು. ತುಳು,ಕನ್ನಡ ಹಾಗೂ ಹವ್ಯಕ ಭಾಷೆಗಳಲ್ಲಿ ಕಾದಂಬರಿ, ನಾಟಕ, ಪ್ರಬಂಧ, ಕವನ, ಕಥೆಗಳು ಪ್ರಕಟಗೊಂಡಿವೆ.

ತುಳು ಕೃತಿಗಳು: ಬೊಳ್ಳಿ'(ಕಾದಂಬರಿ),
‘ಬೇಲಿ – ಸಾಪೊದ ಕಣ್ಣ್’, ‘ಗಿಡ್ಡಿ’, ‘ಮಂದಾರ ಮಲಕ’ (ನಾಟಕಗಳು).

ಕನ್ನಡ ಕೃತಿಗಳು: ‘ಸಂಚಿಯೊಳಗಿನ ಸಂಜೆಗಳು’ (ಕವನ ಸಂಕಲನ),
‘ಕಂದೀಲು’ (ಕಥಾಸಂಕಲನ),
‘ಅವಲಕ್ಕಿ ಪವಲಕ್ಕಿ’ (ಪ್ರಬಂಧ ಸಂಕಲನ),
‘ನೆಲ ಉರುಳು’, ‘ಪರಿಧಿಯಾಚೆ’ (ನಾಟಕಗಳು).

ಹವ್ಯಕ ಕತೆಗಳಿಗಾಗಿ ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದ ದತ್ತಿನಿಧಿ, ಕರಾವಳಿ ವಾಚಕಿಯರ ಲೇಖಕಿಯರ ಸಂಘದ ದತ್ತಿನಿಧಿ ಪಡೆದುಕೊಂಡಿದ್ದಾರೆ.
ತುಳು ಸಾಹಿತ್ಯಕ್ಕಾಗಿ ಪೂವರಿ ತುಳು ಸಾಹಿತ್ಯ ಪ್ರಶಸ್ತಿ, ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪುರಸ್ಕಾರ
ಸತತ ಮೂರು ಬಾರಿ ಕುಡ್ಲ ತುಳುಕೂಟ ಆಯೋಜನೆಯ ಶ್ರೀಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಾಟಕ ವಿಭಾಗ ಪುರಸ್ಕೃತರು. ಕತೆಗಳು ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಗಳಿಗೆ ಅನುವಾದವಾಗಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ, ಮೈಸೂರು ದಸರಾ ಕವಿಗೋಷ್ಠಿ ಹಾಗೂ ಜಿಲ್ಲಾ ಅಬ್ಬಕ್ಕ ಉತ್ಸವಗಳಲ್ಲಿ ತುಳು ಭಾಷೆಯ ಕವಿಯಾಗಿ ಭಾಗವಹಿಸಿದ್ದಾರೆ.