Speaker 2026
ಧರ್ಮೇಂದ್ರ ಕುಮಾರ್
Bio
ಪರಿಸರ ಮತ್ತು ಸಾಮಾಜಿಕ ಕಾರ್ಯ ಕರ್ತ ರಾದ **ಪರಶುರಾಮೇ ಗೌಡರು** 1960 ರಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರಿನಲ್ಲಿ ಜನಿಸಿದರು. ತಮ್ಮ 19ನೇ ವಯಸ್ಸಿನಲ್ಲಿಯೇ ರೈ ತ ಚಳವಳಿಗೆ ಧುಮುಕಿದ ಇವರು, ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಪದ್ಧತಿಯಂತೆ ಅತ್ಯಂತ ಸರಳವಾಗಿ ವಿವಾಹವಾದರು. ವೃತ್ತಿಜೀ ವನದಲ್ಲಿ ಇಂಜಿನಿಯರ್, ಉಪನ್ಯಾ ಸಕ ಹಾಗೂ ಆರ್ಟಿಒ ಇಲಾಖೆಯಲ್ಲಿ ಮೋ ಟಾರ್ ವಾಹನ ನಿರೀ ಕ್ಷಕರಾಗಿ ಸೇ ವೆ ಸಲ್ಲಿಸಿದ ಇವರು, ಪರಿಸರ ಮತ್ತು ಸಮಾಜಸೇ ವೆಗಾಗಿಯೇ 2011 ರಲ್ಲಿ (ತಮ್ಮ 50ನೇ ವಯಸ್ಸಿನಲ್ಲಿ) ಸ್ವಯಂ ನಿವೃತ್ತಿ (VRS) ಪಡೆದರು.
ನಿವೃತ್ತಿಯ ನಂತರ ಯಾವುದೇ ಸ್ವಾರ್ಥ ವಿಲ್ಲದೆ ಸಂಪೂರ್ಣ ವಾಗಿ ಪರಿಸರ ಸಂರಕ್ಷಣೆಗೆ ಮುಡಿಪಾದ ಇವರು, **’ಪರಿಸರಕ್ಕಾ ಗಿ ನಾವು’** ಅಭಿಯಾನದ ಮೂಲಕ ರಾಜ್ಯಾ ದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ‘ಪರಿಸರ ಬಳಗ’ ಸಂಸ್ಥೆಯ ಮೂಲಕ ಚಾಮುಂಡಿ ಬೆಟ್ಟದ ರೋ ಪ್ವೇ ಯೋ ಜನೆಗೆ ತಡೆ, ಬೆಂಗಳೂರಿನ ಕಂಟೋ ನ್ಮೆ ಂಟ್ ರೈ ಲ್ವೆ ಕಾಲೋ ನಿಯಲ್ಲಿ 368 ಮರಗಳ ಕತ್ತರಿಸುವಿಕೆಗೆ ತಡೆಯಾಜ್ಞೆ ಹಾಗೂ ಟಿ. ನರಸೀ ಪುರದ ಕೆಎಸ್ಐಸಿ ರೇ ಷ್ಮೆ ಕಾರ್ಖಾ ನೆ ಆವರಣದ ಶತಮಾನದಷ್ಟು ಹಳೆಯ ಮರಗಳ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊ ತೆಗೆ ಕಲ್ಯಾ ಣಿಗಳ ಪುನಶ್ಚೇತನ ಹಾಗೂ ಶಾಲಾ-ಕಾಲೇ ಜುಗಳಲ್ಲಿ ಗಿಡ ನೆಡುವ ನಿರಂತರ ಕಾರ್ಯ ಗಳ ಮೂಲಕ ಯುವ ಪೀ ಳಿಗೆಗೆ ಮಾದರಿಯಾಗಿದ್ದಾರೆ.