ಹರಿಣಾಭಿಸರಣ

ಹರಿಣಾಭಿಸರಣ

23 JULY | 3:30 PM – 5:00 PM

GARDENIA, Southern Star, Mysuru

ಸಾಹಿತ್ಯ ಮತ್ತು ಸಂಗೀತದ ಸಮಪಾಕದಂತಹ ರಚನೆ ಈ ಗೀತರೂಪಕ. ಸಂಗೀತದ ಜೊತೆಗೆ ನೃತ್ಯ ಮತ್ತು ಅಭಿನಯದ ಮೂಲಕ ರಸಿಕರನ್ನು ತಲುಪುವ ಸಾಹಿತ್ಯ ಪ್ರಕಾರವಿದು. ಪು. ತಿ. ನ. ಅವರ “ಹಂಸ ದಮಯಂತಿ ಮತ್ತು ಇತರ ರೂಪಕಗಳು” ಎಂಬ ಕೃತಿಯ ಒಂದು ಗೀತರೂಪಕ “ಹರಿಣಾಭಿಸರಣ”. ರಾಮಾಯಣದ ಪಂಚವಟಿಯ ಕಥಾನಕದಲ್ಲಿ ಬರುವ ಮಾಯಾಜಿಂಕೆಯ ಕಥಾವಸ್ತುವನ್ನು ಈ ಕೃತಿ ಹೊಂದಿದೆ. ಯಕ್ಷಗಾನದ ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕವೆಂಬ ನಾಲ್ಕೂ ಅಂಗಗಳೊಂದಿಗೆ ಯಕ್ಷಗಾನ ರೂಪಕದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಿದು.