ಬಿ.ಕೆ. ಮೀನಾಕ್ಷಿ. ಮೈಸೂರಿನವರಾದ ಇವರು
ಕವಯತ್ರಿ/ ಲೇಖಕಿ, ವಿಮರ್ಶಕಿ.
ಕತೆ, ಕವನ, ಪ್ರಬಂಧ, ಲೇಖನ, ಪುಸ್ತಕ ವಿಮರ್ಶೆ, ಮಕ್ಕಳ ಕತೆಗಳನ್ನು ಬರೆಯುವ ಹವ್ಯಾಸವುಳ್ಳ ಇವರ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.
ಇದುವರೆಗೂ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರಶಸ್ತಿಗಳ ಜೊತೆ, ಇವರ ಪುಸ್ತಕಗಳಿಗೆ ಹಲವು ಬಹುಮಾನಗಳು ಸಂದಿವೆ.
ಅಕ್ಕಮಹಾದೇವಿ ಪ್ರಶಸ್ತಿ , ಭೂಮಿಗಿರಿ ನಾರಣಪ್ಪ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರಶಸ್ತಿಗಳಿಗೆ ಬಿ ಕೆ ಮೀನಾಕ್ಷಿ ಭಾಜನರಾಗಿದ್ದಾರೆ